top of page

‘Yogamaye’ by Dr. S. Srikanta Sastri

‘Yogamaye’ by Dr. S. Srikanta Sastri (republished in ‘Viveka Prabha’ Magazine – August 2024)

ಶ್ರೀರಾಮಕೃಷ್ಣ ಪರಮಹಂಸರ ಜೀವನಚರಿತ್ರೆಯಲ್ಲಿ ಅನಾದಿಯಾಗಿ ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ ಅನುಭವ ಸಿದ್ದವಾದ ಆಧ್ಯಾತ್ಮಿಕ ತತ್ವಗಳಿಗೆ ನಿದರ್ಶನಗಳು ಪುನಃ ಪುನಃ ಕಂಡುಬರುವುದು ಆಶ್ಚರ್ಯವಾಗಿದೆ.

ಸರ್ವಮತ ಸಮನ್ವಯರೂಪವಾದ ಅದ್ವೈತಾನುಭೂತಿಗೆ ಪ್ರತ್ಯಕ್ಷ ದೃಷ್ಟಾನ್ತಗಳು ಸಿಕ್ಕುತ್ತವೆ. ಭಗವಾನ್ ಶ್ರೀ ರಾಮಕೃಷ್ಣರ ಒಂದೊಂದು ಸಾಧನೆಯಲ್ಲು ಆಯಾ ಸಂಪ್ರದಾಯ ಗ್ರಂಥಗಳಲ್ಲುಕ್ತವಾದ ತತ್ವಗಳು, ಹಂತಗಳು ನೈಸರ್ಗಿಕವಾಗಿ ಅಭಿವ್ಯಕ್ತವಾಗಿವೆ. ಶೈವ, ವೈಷ್ಣವ, ಕ್ರೈಸ್ತ, ಬೌದ್ಧ, ಇಸ್ಲಾಂ ಪಂಥಗಳಲ್ಲಿ ವಿಧಿಸಿರುವ ಆಯಾ ಸಾಧನ ಕ್ರಮಗಳ ಫಲಗಳಿಗೆ ಜೀವಂತ ನಿದರ್ಶನಗಳು ಕಂಡುಬರುವುದರಿಂದ ಸರ್ವಮತಗಳನ್ನೊಳಗೊಂಡು ಎಲ್ಲಕ್ಕು ಅತೀತವಾದ ಆದ್ವಿತೀಯಾನುಭವವೇ ಪರಮಧ್ಯೇಯವೆಂದು ಸಿದ್ದವಾಗಿದೆ.

ಶ್ರೀ ಶಂಕರಾಚಾರ್ಯರು ಹೇಳಿದಂತೆ ಮೋಕ್ಷವು ಉತ್ಪಾದ್ಯ, ವಿಕಾರ್ಯ, ಸಂಸ್ಕಾರ್ಯ ಮತ್ತು ಆಪ್ಯ ಎಂಬ ಚತುರ್ವಿದ ದ್ರವ್ಯ ವಿಲಕ್ಷಣವಾಗಿರುವುದರಿಂದ ಸಾಧ್ಯವಲ್ಲ; ಸಿದ್ದವಾದುದು ಸಿದ್ದವಾಗಿರುವುದನ್ನು ಸಾಧಿಸಲು ಪ್ರಯತ್ನಿಸುವುದು ಅವಿದ್ಯಾ ಮತ್ತು ಅಜ್ಞಾನ ರೂಪವಾದ ಮಾಯೆಯಿಂದ ಪ್ರಚೋದಿತವಾಗಿದೆ.

ಬೌದ್ಧಮತದಲ್ಲಿ ಮಾಯೆ ಆತ್ಮಖ್ಯಾತಿ, ಅಸತ್ಖ್ಯಾತಿ ರೂಪವೆಂದು ಭಾವಿಸಿರುವುದರಿಂದ ಶೂನ್ಯವಾದ ಪ್ರಸಂಗ ಉಂಟಾಗುತ್ತದೆ. ಎಲ್ಲವನ್ನು ಸತ್ಯ, ನಿತ್ಯ, ಅವಿನಾಶಿ ಎಂದು ಪ್ರಪಂಚದ ಪ್ರಾಚೀನ ಮತ್ತು ನವೀನ ಮತಗಳು ಅಖ್ಯಾತಿ, ಅನ್ಯಥಾಖ್ಯಾತಿ, ಅಖ್ಯಾತಿ ಸಂವಳಿತ ಅನ್ಯಥಾಖ್ಯಾತಿ, ಅಭಿನವ ಅನ್ಯಥಾಖ್ಯಾತಿ ಇತ್ಯಾದಿ ಖ್ಯಾತಿ ವಾದಗಳ್ಳನ್ನನು ಸರಿಸಿ ಮಾಯೆ ಎಂದರೆ ಈಶ್ವರನ ಆವರಣ ವಿಕ್ಷೇಪ ರೂಪಶಕ್ತಿ ಎಂದು ಭಾವಿಸುವುವು.

‘Yogamaye’ by Dr S. Srikanta Sastri describes the life and times of Sri Ramakrishna Paramahamsa and the importance he gave to the art and practice of Yoga, in it's ethereal and spiritual sense.

©

This article was originally published in Prajavani newspaper and thence appeared in collection of Kannada writings titled 'Samshodhana Lekhanagalu'.

Page 1 of 2

Click on link to read full article

bottom of page