OFFICIAL WEBSITE OF DR S. SRIKANTA SASTRI, M. A., D. Litt (1904 - 1974)
Articles > Dr. S. Srikanta Sastri's Foreword to Sundareshan's "Talekattu"
dr. s. srikanta sastri's foreword to sundareshan's talekattu
article Details:
Foreword to Sundareshan's Kannada Book "Talekattu" by Dr. S. Srikanta Sastri (1963)
Ch. Sundareshan, M. A. was a Kannada lecturer at Maharani College, Bangalore when this book was published.
Printed at Tandava Moorthy Press, Irwin Road, Mysore by C. Nataraj in 1963
Sundareshan was Dr. S. Srikanta Sastri's student at Mysore.
Sneak Peek into the article
Dr. S. Srikanta Sastri's Foreword to Sundareshan's "Talekattu"
ತಲೆಕಟ್ಟು
ಡಾ।। ಎಸ್. ಶ್ರೀಕಂಠಶಾಸ್ತ್ರೀಯವರ ಅಭಿಪ್ರಾಯ
ನನ್ನ ಪ್ರಿಯ ಶಿಷ್ಯರು ಸ್ನೇಹಿತರು ಆದ ಶ್ರೀ ಚ. ಸುಂದರೇಶನ್ ಎಂ. ಎ., ಅವರು ಕನ್ನಡ ಲಿಪಿಶಾಸ್ತ್ರದ ಒಂದಂಶವಾದ "ತಲೆಕಟ್ಟು" ವಿಷಯವಾಗಿ ಅಧ್ಯಯನಮಾಡಿ ಸಂಶೋಧನಾತ್ಮಕವಾದ ಈ ಚಿಕ್ಕಪುಸ್ತಕವನ್ನು ರಚಿಸಿರುವರು. ಪುಸ್ತಕದ ಆಕೃತಿ ಚಿಕ್ಕದಾದರೂ ಪ್ರಕೃತಿಯೂ ಸಂಸ್ಕೃತಿಯೂ ಬೃಹತ್ತಾಗಿದೆ. ಕನ್ನಡ ಲಿಪಿವಿನ್ಯಾಸದ ವಿಷಯವಾಗಿ ಬರೆದಿರುವ ಗ್ರಂಥಗಳು ಬಹಳ ಸ್ವಲ್ಪ. ಲಿಪಿಶಾಸ್ತ್ರಧ್ಯಯನದಲ್ಲಿ ಇದುವರೆಗೂ ಬೂಹ್ಲರ್ ಬರ್ನೆಲ್ ಅಂತಹವರ ಗ್ರಂಥಗಳೇ ನಮಗೆ ಪ್ರಮಾಣವಾಗಿದ್ದವು. ತೋಗರೆ ನಂಜುಂಡಶಾಸ್ತ್ರಿಗಳ "ಕರ್ಣಾಟ ಭಾಷಲಿಪಿ", ನನ್ನ "ಭಾರತೀಯ ಸಂಸ್ಕೃತಿ", "ಪುರಾತತ್ವ ಶೋಧನೆ"ಗಳಲ್ಲಿ ಸ್ಥೂಲವಾಗಿ ಇದರ ವಿವೇಚನೆ ನಡೆದಿದೆ. ಶ್ರೀ. ಚ. ಸುಂದರೇಶನ್ ಅವರ ಗ್ರಂಥ ಕನ್ನಡ ಅಕ್ಷರಗಳ ತಲೆಕಟ್ಟಿಗಾಗಿಯೇ ಮೀಸಲಾಗಿದೆ.
ಗುಪ್ತರಕಾಲದ ಪೇಟಕಾಶಿರ (box-headed) ಅಕ್ಷರಗಳಿಂದ ಶರ-ಶಿರ (arrow-headed) ಅಕ್ಷರಗಳು ಉಧ್ಭವಿಸಿದ ಮೇಲೆ ದಕ್ಷಿಣ ಪ್ರಸ್ಥಭೂಮಿಯಲ್ಲೆಲ್ಲ ಕನ್ನಡ-ತೆಲಗು ಲಿಪಿಯೇ ವಿಶೇಷವಾಗಿ ಹರಡಿದ್ದಿತ್ತು (ಪುರಾತತ್ವಶೋಧನೆ - ಪುಟ ೨೩೩) ಪ್ರಾಚೀನ ಹಳಗನ್ನಡ ಅಕ್ಷರಗಳಿಗೆ ತಲೆಕಟ್ಟು ಇರಲಿಲ್ಲ. ಅನಂತರ ಅಕ್ಷರಮೇಲ್ಭಾಗದಲ್ಲಿ ಸಣ್ಣ ಅಡ್ಡಗೀಟು ಹಾಕುತ್ತಿದ್ದರು. ಅರ್ಕಾವತ್ತನ್ನು ಅಕ್ಷರದ ಮೇಲೆ ತೋರಿಸುತ್ತಿದ್ದರು ವರ್ಣಸಮಾಮ್ನಾಯಾದ ಅಂತ್ಯದಲ್ಲಿ "ಹ" ಆದಮೇಲೆ "ಳ, ಕ್ಪ, ಜ್ಞ" ಅಥವಾ ಳ, ಕ್ಪ, ಱ, ಎಂದು ಹೇಳುತ್ತಿದ್ದರು. ಸುಮಾರು ಹದಿಮೂರನೆ ಶತಾಬ್ದದ ಅಂತ್ಯದಿಂದ ಕನ್ನಡ-ತೆಲಗು ಲಿಪಿಗಳು ಸ್ವಲ್ಪ ಭಿನ್ನವಾದರೂ ವಿಜಯನಗರ ಸಾಮ್ರಾಜ್ಯದ ಅಂತ್ಯದವರೆಗೂ ಸಾಮ್ಯಗಳೇ ಬಹಳವಾಗಿದ್ದವು. ಕಲ್ಪಚ್ಚು ಸೀಸದ ಅಕ್ಷರಗಳು ಬಂದ ಮೇಲೆ ತೆಲಗು ಕನ್ನಡ ಲಿಪಿಗಳು ಬೇರೆಯಾದವು. ಈಗ ಕೆಲವರು ಆಂಧ್ರ ಕರ್ನಾಟಕಕ್ಕೆಲ್ಲ ಏಕಲಿಪಿಯನ್ನು ತರಬೇಕೆಂದು ಪ್ರಯತ್ನ ಮಾಡುತ್ತಿರುವರು. ಇಂತಹ ಉದ್ಯಮದಲ್ಲಿ 'ತಲೆಕಟ್ಟು' ಸಹಗಮನೀಯವಾದ ಒಂದು ಅಂಶ.
ಶ್ರೀ ಚ. ಸುಂದರೇಶನ್ ಅವರು ಶ್ರದ್ದೆಯಿಂದ ಅಧ್ಯಯನಮಾಡಿ ಈ ಹೂತ್ತಗೆಯನ್ನು ರಚಿಸಿರುವುದಕ್ಕೆ ಅಭಿನಂದಿಸುತ್ತೇನೆ. ಅವರ ಪ್ರಯತ್ನವು ಇದೇ ರೀತಿಯಲ್ಲಿ ಮುಂದುವರಿಯಲೆಂದು ಹಾರೈಸುತ್ತೇನೆ.
ಡಾ।। ಎಸ್. ಶ್ರೀಕಂಠಶಾಸ್ತ್ರೀ, ಎಂ.ಎ., ಡಿ.ಲಿಟ್
ಇತಿಹಾಸದ ನಿವೃತ್ತಪ್ರಾಧ್ಯಾಪಕರು,
ಮೈಸೂರು ವಿಶ್ವವಿದ್ಯಾನಿಲಯ.
೧೮. ೫. ೧೯೬೩
©
C. Sundareshan (author of Kannada book "Talekattu" [1963])