top of page

Articles > G. Venkatasubbiah on S. Srikanta Sastri

g. venkatasubbiah on s. srikanta sastri

G. Venkatasubbiah on S. Srikanta Sastri

article Details:

 

G. Venkatasubbiah's reminiscences of his teacher Dr. S. Srikanta Sastri (From his book). 

Sneak Peek into the article

G. Venkatasubbiah on S. Srikanta Sastri

ಡಾ।। ಎಸ್. ಶ್ರೀಕಂಠ ಶಾಸ್ತ್ರಿಗಳ ಜನ್ಮಶತಾಬ್ದದಲ್ಲಿ ವಿದ್ಯಾರ್ಥಿಯೊಬ್ಬನ ನೆನಪು (೧೯೦೪ - ೧೯೭೪)

ಡಾ।। ಎಸ್. ಶ್ರೀಕಂಠ ಶಾಸ್ತ್ರಿಗಳ ಹೆಸರು ಕೇಳಿದೊಡನೆಯೇ ನನ್ನ ಮನಸ್ಸು ಎಪ್ಪತ್ತು ವರ್ಷಗಳ ಹಿಂದಕ್ಕೆ ಓಡುತ್ತದೆ. ಮೈಸೂರಿನ ಮಹಾರಾಜರ ಕಾಲೇಜಿನ ವಿದ್ಯಾರ್ಥಿಗಳ ಒಡನೆ ಓಡಾಡಿ, ಮಹಾಸಮರ್ಥರಾದ ಅಧ್ಯಾಪಕರ ಪ್ರವಚನಗಳನ್ನು ಕೇಳಿ, ಸ್ವಂತ ಚೈತನ್ಯಕ್ಕೆ ಅನೇಕ ಬಗೆಯ ಶಕ್ತಿಯನ್ನು ಗಳಿಸಿಕೊಂಡ ಸಮಯ ಕಣ್ಮುಂದೆ ಕಟ್ಟುತ್ತದೆ.ಅಂದಿನ ಮಹಾರಾಜ ಕಾಲೇಜಿನಲ್ಲಿ ನೆರವೇರುತ್ತಿದ್ದ ವಿದ್ಯಾದಾನವನ್ನು ಭಾರತದಲ್ಲೆಲ್ಲ ಜನತೆ ಮಚ್ಚುಕೊಂಡಿತ್ತು. ಮಹಾರಾಜ ಕಾಲೇಜಿನ ಚರಿತ್ರೆಯಲ್ಲಿ ಒಂದು ಸುವರ್ಣಯುಗವೆಂದು ಆ ಕಾಲಕ್ಕೆ ಹೆಸರುಬಂದಿತ್ತು. 

ನಾನು ಕನ್ನಡ ಆನರ್ಸ ತರಗತಿಗೆ ಸೇರಿದ ವರ್ಷ ೧೯೩೫. ಅಂದಿನ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಪ್ರಾಚೀನ ಗ್ರೀಕ್ ಮತ್ತು ರೋಮನ್ ಚರಿತ್ರೆ, ಸಂಸ್ಕೃತ ಮತ್ತು ತರ್ಕ ಶಾಸ್ತ್ರಗಳನ್ನು ಅಭ್ಯಾಸಮಾಡಿ ಪದವಿ ತರಗತಿಗೆ ಸೇರಿಕೊಂಡಿದ್ದೆ. ಕನ್ನಡದಲ್ಲಿ ಅಧಿಕ ಅಂಕಗಳನ್ನು ಗಳಿಸಿದ್ದುದರಿಂದ ವಿಧ್ಯಾರ್ಥಿವೇತನದ ಆಸೆಯೂ ಮನಸ್ಸಿನಲ್ಲಿತ್ತು. ಆನರ್ಸ ತರಗತಿಗೆ ಪಾಠಕ್ಕೆ ಬರುವ ಅಧ್ಯಾಪಕ ವರ್ಗದ ಬಗ್ಗೆ ಕುತೂಹಲ ತುಂಬಿದ್ದ ಕಾಲ. ನಮಗಿಂತ ಮುಂಚೆ ವಿದ್ಯಾರ್ಥಿಗಳಾಗಿದ್ದವರ ಮೂಲಕ ಅಧ್ಯಾಪಕರೆಲ್ಲರ ಬಗ್ಗೆ ತಿಳಿದು ಕೊಳ್ಳಬೇಕೆಂಬ ಹೆಬ್ಬಯಕೆ. 

©

B. A. Honours (Third Year) Group Photo at Maharaja College showing G. V. with B. M. Srikantaiah

B. A. Honours (Third Year) Group Photo at Maharaja College showing G. V. with B. M. Srikantaiah

Page 1 of 6

Read the entire text below

bottom of page