OFFICIAL WEBSITE OF DR S. SRIKANTA SASTRI, M. A., D. Litt (1904 - 1974)
Books > Roman Chakradipatyada Charithre & Gandabherundada Vikasa
roman chakradipatyada charithre & gandabherundada vikasa
Book Details:
Published by H. M. Shankarnarayan Rao, Krishnamurthypuram, Mysore in 1949.
Sneak Peek into the Book
Roman Chakradipatyada Charithre mathu Gandabherundada Vikasa by Dr. S. Srikanta Sastri
ರೋಮನ್ ಚಕ್ರಾಧಿಪತ್ಯದ ಚರಿತ್ರೆ
ಅಧ್ಯಾಯ ೧
ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಗ್ರೀಸ್ ಮತ್ತು ರೋಮ್ ಚರಿತ್ರೆಗಳೇ ಹಿನ್ನಲೆಯಾಗಿರುವದರಿಂದ ಆಧುನಿಕ ಯೂರೋಪ್ ಖಂಡದ ಪ್ರಗತಿಕ್ರಮವನ್ನು ತಿಳಿಯಬೇಕಾದರೆ ಗ್ರೀಕರಿಂದ ಬಂದ ವಿಜ್ಞಾನ, ಕಲಾಕೌಶಲ್ಯ, ತತ್ವವಿವೇಚನೆ, ಪ್ರಜಾಪ್ರಭುತ್ವಪದ್ಧತಿ, ರೋಮನ್ನರಿಂದ ಪಡೆದ ಸಾಮ್ರಾಜ್ಯಕ್ರಮ, ನ್ಯಾಯರೀತಿ, ಅಂತರರಾಷ್ಟ್ರೀಯ ವ್ಯವಹಾರ ಪದ್ದತಿಗಳ ಜ್ಞಾನವು ಅವಶ್ಯಕ. ರೋಮನ್ನರು ಗ್ರೀಕರನ್ನು ಗೆದ್ದರೂ ಗ್ರೀಕ್ ಸಂಸ್ಕೃತಿಗೆ ಅಧೀನರಾದರು. ಗ್ರೀಕ್ ಸಂಸ್ಕೃತಿಯನ್ನು ತಾವು ರಕ್ಷಿಸಿಕೊಂಡುಬಂದು ಕ್ರೈಸ್ತಮತವು ಹುಟ್ಟಿ ಬೆಳೆದು ಪ್ರಬಲವಾದಾಗ ಮಧ್ಯಕಾಲೀನ ಯುರೋಪ್ ಸಂಸ್ಕೃತಿಯಲ್ಲಿ ಗ್ರೀಕರ ಸಂಸ್ಕೃತಿ, ಕ್ರೈಸ್ತಮತತತ್ವಗಳು ಮತ್ತು ರೋಮನ್ ಸಾಮ್ರಾಜ್ಯ ಕ್ರಮ ಮಿಳಿತವಾಗುವುದಕ್ಕೆ ಸಹಾಯಕರಾದರು. ಮತ್ತು ರೋಮನ್ನರ ವೈಶಿಷ್ಟ್ಯವು ಅವರು ಸ್ಥಾಪಿಸಿದ ಪೌರ ಮತ್ತು ಅಂತರರಾಷ್ಟ್ತ್ರೀಯ ನ್ಯಾಯಪದ್ದತಿಯಲ್ಲಿ ಕಂಡುಬರುವುದು. ಆಧುನಿಕ ಪಾಶ್ಚಾತ್ಯದೇಶಗಳ ನ್ಯಾಯರೀತಿಯ ಪ್ರಜೆಗಳ ಮೂಲಬೂತಹಕ್ಕುಗಳು, ಪೌರಾಧಿಕಾರಗಳೆಲ್ಲ ರೋಮನ್ನರನ್ನು ಅನುಸರಿಸುತ್ತವೆ. ಅಲ್ಲದೆ ರೂಮ್ ಚರಿತ್ರೆಯಲ್ಲಿ ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರಗಳು ಹೇಗೆ ಬೆಳೆದು ಕ್ಷೀಣಿಸುವವೆಂದು ತಿಳಿಯಬಹದು. ತಮ್ಮ ಚರಿತ್ರೆಯ ಆರಂಭದಲ್ಲಿಯೇ ರೋಮನ್ನರು ರಾಜಾಧಿಕಾರವನ್ನು ತೆಗೆದುಹಾಕಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಆದರೆ ಪ್ರಜಾಪ್ರಭುತ್ವದಲ್ಲಿ ರಾಜಕೀಯಪಕ್ಷಗಳ ಸ್ಪರ್ಧೆಯು ಹೆಚ್ಚಾಗಿ ಅಂತಃಕಲಹಗಳು ಹುಟ್ಟಿ ಸರ್ವಾಧಿಕಾರಿಗಳು ಪ್ರಜಾಪ್ರಭುತ್ವವನ್ನು ನಾಮವಶೇಷವಾಗಿ ಮಾಡಿ ಚಕ್ರಾಧಿಪತ್ಯಗಳನ್ನು ಸ್ಥಾಪಿಸಿದರು.
'Roman Chakradipatyada Charithre' - First Edition Book Cover
©
Roman Coin